Katheyadhale Kavayathree

Author:

Prashna Narayan Rai

Publisher:

Clever Fox Publishing

Rs349

Availability: Available

Shipping-Time: Usually Ships 5-9 Days

    

Rating and Reviews

0.0 / 5

5
0%
0

4
0%
0

3
0%
0

2
0%
0

1
0%
0
Publisher

Clever Fox Publishing

ISBN-13

9789356482562

ISBN-10 935648256X
Binding

Paperback

Language (Kannada)
Dimensions (Cms) 22 X 14X 1.5
Weight (grms) 120
ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ,ನ್ಯಾಯ ಹಾಗೂ ಅನ್ಯಾಯನ ತೂಗಿದರೆ ನ್ಯಾಯನೇ ಗೆಲ್ಲುತ್ತದೆ ಎನ್ನುವ ಕಥೆ ಕೇಳಿ ಬೆಳೆದ ಸುಧಾತ್ರಿಗೆ ಮೊದಲ ಬಾರಿ ಕೋರ್ಟ್ ಗೆ ಹೋದಾಗ ಆದ ಅನುಭವವೆಂದರೆ ನ್ಯಾಯದ ತಕ್ಕಡಿಯಲ್ಲಿ ನ್ಯಾಯ ಹಾಗೂ ಅನ್ಯಾಯನ ತೂಗಿದಾಗ ಯಾವಾಗಲೂ ನ್ಯಾಯಾನೇ ಗೆಲ್ಲಲ್ಲ, ನ್ಯಾಯ ಹಾಗೂ ಅನ್ಯಾಯದ ನಡುವೆ ಯಾವುದು ಬಲಿಷ್ಠವಾಗಿದೆಯೋ ಅದೇ ಗೆಲ್ಲುವುದೆಂಬ ಸತ್ಯ. ಇದಕ್ಕಾಗಿ ಈ ಜಗದಲ್ಲಿ ನ್ಯಾಯದ ತೂಕನ ಹೆಚ್ಚಿಸಲು ಅವಳು ಕೈಗೊಂಡ ತೀರ್ಮಾನ ಏನು? ತನ್ನ ಕುಡುಕ ಗೆಳೆಯನಾದ ಕ್ವಾಟ್ರು ಕರಿಯಪ್ಪನ ಗ್ಯಾಂಗ್ ಜೊತೆಗೆ ನಶೆಯಲ್ಲೆ ತೇಲಾಡುವ ಮುಗಿಲ್, ಅವನಿಗೆ ಬದುಕ ವಾಸ್ತವವನ್ನು ಪರಿಚಯಿಸಲು ಹೆಣಗಾಡೋ ಬಾಲ್ಯದ ಗೆಳತಿ ಆಯೇಷಾ,ಈಕೆ ಅವನನ್ನು ಸರಿದಾರಿ ತರಳು ಸತತ ಪ್ರಯತ್ನಗಳ ನಂತರ ಸುಸ್ತಾಗಿ ಕೈಚೆಲ್ಲಿ ಕುಳಿತಾಗ ಅವಳಿಗೆ ತನ್ನ ಕಾಲೇಜ್ನ ಕಿರಿಯ ಸಹಪಾಠಿ ಬರಹಗಾರ್ತಿ ಸುಧಾತ್ರಿ ಜೊತೆಯಾಗುತ್ತಾಳೆ.ಕಲ್ಪನೆಯ ಕಥೆಗಳನ್ನು ಬರೆದು ಜನರ ಮನಗೆದ್ದ ಸುಧಾತ್ರಿ ಮುಗಿಲ್ ಬದುಕಲ್ಲಿ ಒಲವ ಕಥೆ ಬರೆದು ಕೊನೆಗೆ ತಾನೆ ಒಂದು ಕಥೆಯಾದಳೇ......??? ಇದೇ ಭೂಮಿ,ಅದೇ ಬಾನು,ತಮ್ಮೊಲವ ಕಥೆಯನ್ನು ನಿಮ್ಮ ಮುಂದಿಡುತಿದ್ದಾರೆ ಕಥೆಯಾದಳೇ ಕವಯಿತ್ರಿ ಎಂಬ ಶೀರ್ಷಿಕೆಯ ಮೂಲಕ. ಜಗತ್ತಿನ ವಿನ್ಯಾಸ ದಿನದಿಂದ ದಿನಕ್ಕೆ ಬದಲಾಗುತ್ತಿದೆ."ಬದಲಾಗುತಿದೆ" ಎನ್ನುವುದಕ್ಕಿಂತ ಮನುಷ್ಯ ಬದಲಾಯಿಸುತಿದ್ದಾನೆ ಎನ್ನುವುದು ವಾಸ್ತವ. ಈ ಜಗದ ಬದಲಾವಣೆಗೆ ಸೃಷ್ಟಿಯ ಮೂಲವಾದ ಪ್ರಕೃತಿಯ ಒಪ್ಪಿಗೆ ಇದೆಯೇ???ಬದಲಾವಣೆ ಜಗದ ನಿಯಮ ಎಂದು ತನ್ನಿಚ್ಛೆಯಂತೆ ಈ ಜಗದ ಪಂಚಭೂತಗಳನ್ನು ಬಳಸಿಕೊಂಡು ಅವುಗಳಲ್ಲಿ ಕೂಡ ಬದಲಾವಣೆ ಕಾಣ ಬಯಸುವ ಮಾನವನಿಗೆ ಅದರ ಮುಂದಿನ ದುಷ್ಪರಿಣಾಮಗಳ ಅರಿವಿಲ್ಲವೇ?ಇಂದಿನ ಈ ಜಗದಲ್ಲಿ ಬಾನು ಭೂಮಿಯ ಪ್ರೇಮಕಥೆಯನ್ನು ಹೊಸ ರೂಪದಲ್ಲಿ ತುಸು ಆಧುನಿಕತೆಯ ಬೆರೆಸಿ ,ಸುಧಾತ್ರಿ ಹಾಗೂ ಮುಗಿಲ್ ಜೊತತೆಗೆ ಇನ್ನೂ ಹತ್ತು ಹಲವು ಪಾತ್ರಗಳೊಂದಿಗೆ ಕಥೆಯಾದಳೇ ಕವಯಿತ್ರಿ ಕಾದಂಬರಿಯನ್ನ ರಚಿಸಲಾಗಿದೆ

Prashna Narayan Rai

No Review Found